ವೈದಿಕ ಜ್ಯೋತಿಷ್ಯಶಾಸ್ತ್ರ
Level
Vedic Astrology Master class
Starting Date
16-11-2026
Time
11:00 AM - 01:00 PM
Duration
03 Months
ವೈದಿಕ ಜ್ಯೋತಿಷ್ಯದ ಅಧ್ಯಯನ
ವೈದಿಕ ಜ್ಯೋತಿಷ್ಯವು ಭಾರತೀಯ ಜ್ಞಾನ ಪರಂಪರೆಯಲ್ಲಿ ಶತಮಾನಗಳಿಂದ ಬೆಳೆದು ಬಂದಿರುವ ವಿಶಿಷ್ಟ ಜ್ಯೋತಿಷ್ಯ ಪದ್ಧತಿಯಾಗಿದೆ. ಜನನ ಸಮಯದಲ್ಲಿ ಗ್ರಹಗಳು, ರಾಶಿಗಳು ಮತ್ತು ನಕ್ಷತ್ರಗಳ ಸ್ಥಿತಿಯನ್ನು ಆಧರಿಸಿ ವ್ಯಕ್ತಿಯ ಸ್ವಭಾವ, ಜೀವನದ ವಿವಿಧ ಕ್ಷೇತ್ರಗಳು ಮತ್ತು ಪ್ರಮುಖ ಜೀವನಘಟ್ಟಗಳನ್ನು ಅರ್ಥಮಾಡಿಕೊಳ್ಳಲು ಇದು ಒಂದು ಅಧ್ಯಯನ ವಿಧಾನವನ್ನು ಒದಗಿಸುತ್ತದೆ.
ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ರೂಪಿಸುವ ಜಾತಕದ ಮೂಲಕ ಜ್ಯೋತಿಷ್ಯದ ಮೂಲ ತತ್ವಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಲಾಗುತ್ತದೆ. ಈ ತರಬೇತಿಯಲ್ಲಿ ಜಾತಕ ಓದುವಿಕೆ, ಗ್ರಹಗಳ ಸ್ಥಾನ, ಭಾವಗಳು, ರಾಶಿಗಳು, ನಕ್ಷತ್ರಗಳು, ದಶಾ–ಭುಕ್ತಿ, ಗೋಚರ ಮತ್ತು ವರ್ಗ ಕುಂಡಲಿಗಳಂತಹ ಪ್ರಮುಖ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಬಹುದು.
ವೈದಿಕ ಜ್ಯೋತಿಷ್ಯ ಪರಿಚಯ
ವೈದಿಕ ಜ್ಯೋತಿಷ್ಯವು ಭಾರತೀಯ ಜ್ಯೋತಿಷ್ಯ ಪರಂಪರೆಯ ಪ್ರಮುಖ ಮತ್ತು ಪ್ರಾಚೀನ ಜ್ಞಾನಪದ್ಧತಿಗಳಲ್ಲೊಂದು. ವ್ಯಕ್ತಿಯ ಜನನ ಸಮಯದಲ್ಲಿ ಆಕಾಶದಲ್ಲಿದ್ದ ಗ್ರಹಗಳು, ರಾಶಿಗಳು ಮತ್ತು ನಕ್ಷತ್ರಗಳ ಸ್ಥಿತಿಯನ್ನು ಆಧರಿಸಿ ಜೀವನದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಾಸ್ತ್ರವೇ ವೈದಿಕ ಜ್ಯೋತಿಷ್ಯ.
ಜನ್ಮ ದಿನಾಂಕ, ಜನ್ಮ ಸಮಯ ಮತ್ತು ಜನ್ಮ ಸ್ಥಳದ ಆಧಾರದ ಮೇಲೆ ರೂಪಿಸಲಾದ ಜನ್ಮ ಕುಂಡಲಿ ಅಥವಾ ಜಾತಕವು ವ್ಯಕ್ತಿಯ ಜೀವನದ ವಿವಿಧ ಕ್ಷೇತ್ರಗಳನ್ನು ಅಧ್ಯಯನ ಮಾಡಲು ಮೂಲ ಆಧಾರವಾಗುತ್ತದೆ.
ಜಾತಕದಲ್ಲಿ ಏನನ್ನು ಅಧ್ಯಯನ ಮಾಡಲಾಗುತ್ತದೆ?
ವೈದಿಕ ಜ್ಯೋತಿಷ್ಯದಲ್ಲಿ ಮುಖ್ಯವಾಗಿ 12 ಭಾವಗಳು, 12 ರಾಶಿಗಳು, 9 ಗ್ರಹಗಳು ಮತ್ತು 27 ನಕ್ಷತ್ರಗಳು ಸೇರಿದಂತೆ ಹಲವು ಜ್ಯೋತಿಷ್ಯ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಇವುಗಳ ಮೂಲಕ ವ್ಯಕ್ತಿತ್ವ, ಶಿಕ್ಷಣ, ವೃತ್ತಿ, ಹಣಕಾಸು, ವಿವಾಹ, ಸಂತಾನ, ಕುಟುಂಬ, ಆಸ್ತಿ, ವಿದೇಶ ಪ್ರಯಾಣ ಮತ್ತು ಜೀವನದ ಪ್ರಮುಖ ತಿರುವುಗಳನ್ನು ಅಧ್ಯಯನ ಮಾಡಬಹುದು.
ದಶಾ, ಗೋಚರ ಮತ್ತು ವರ್ಗ ಕುಂಡಲಿಗಳು
ವಿಮ್ಶೋತ್ತರೀ ದಶಾ–ಭುಕ್ತಿ ಮತ್ತು ಗೋಚರಗಳ ಮೂಲಕ ಜೀವನದ ಘಟನೆಗಳ ಸಮಯ ಮತ್ತು ಅವುಗಳ ಪ್ರಭಾವವನ್ನು ಅಧ್ಯಯನ ಮಾಡಲಾಗುತ್ತದೆ.
ಅದೇ ರೀತಿ ನವಾಂಶ (D9), ದಶಾಂಶ (D10), ಸಪ್ತಾಂಶ (D7) ಸೇರಿದಂತೆ ವಿವಿಧ ವರ್ಗ ಕುಂಡಲಿಗಳ ಮೂಲಕ ಜಾತಕದ ನಿರ್ದಿಷ್ಟ ಕ್ಷೇತ್ರಗಳನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಬಹುದು.
ತರಗತಿಯಲ್ಲಿ ಏನು ಕಲಿಯುತ್ತೀರಿ?
ಈ ತರಗತಿಯಲ್ಲಿ ಜಾತಕವನ್ನು ಓದುವುದು ಮತ್ತು ವಿಶ್ಲೇಷಿಸುವುದು ಹಂತ ಹಂತವಾಗಿ ಕಲಿಸಲಾಗುತ್ತದೆ. ರಾಶಿ, ಭಾವ, ಗ್ರಹ, ನಕ್ಷತ್ರ, ಯೋಗ, ದಶಾ–ಭುಕ್ತಿ, ಗೋಚರ ಮತ್ತು ವರ್ಗ ಕುಂಡಲಿಗಳ ಜ್ಞಾನವನ್ನು ಪ್ರಾಯೋಗಿಕ ಜಾತಕಗಳ ಮೂಲಕ ಅರ್ಥಮಾಡಿಕೊಳ್ಳಬಹುದು.
ಶಿಕ್ಷಣ, ವೃತ್ತಿ, ವಿವಾಹ, ಸಂತಾನ, ಹಣಕಾಸು, ಆಸ್ತಿ ಮತ್ತು ಇತರ ಜೀವನದ ಪ್ರಮುಖ ವಿಷಯಗಳ ಕುರಿತು ಜಾತಕ ವಿಶ್ಲೇಷಣೆ ಹಾಗೂ predictive techniques ಗಳನ್ನು ಕಲಿಯುವ ಅವಕಾಶ ದೊರೆಯುತ್ತದೆ.
ನಮ್ಮ ವಿಧಾನ
ವೈದಿಕ ಜ್ಯೋತಿಷ್ಯವನ್ನು ಕೇವಲ ಭವಿಷ್ಯ ಹೇಳುವ ಸಾಧನವಾಗಿ ನೋಡದೆ, ಜೀವನದ ಸಾಧ್ಯತೆಗಳು, ಸಮಯದ ಪ್ರಭಾವಗಳು ಮತ್ತು ವ್ಯಕ್ತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಒಂದು ಜ್ಞಾನಪದ್ಧತಿಯಾಗಿ ನಾವು ನೋಡುತ್ತೇವೆ.
ಜ್ಯೋತಿಷ್ಯ ಸೌರಭದಲ್ಲಿ ವೈದಿಕ ಜ್ಯೋತಿಷ್ಯವು ಪರಂಪರೆ, ಅಧ್ಯಯನ ಮತ್ತು ಪ್ರಾಯೋಗಿಕ ಅನುಭವಗಳ ಸಮನ್ವಯವಾಗಿದೆ.
ಕೃಷ್ಣಪ್ರಿಯ ಆರ್ ದೇವಾಂಗಮಠ್
ಮಾರ್ಗದರ್ಶಕರು
ವೇದ ಜ್ಯೋತಿಷ್ಯವನ್ನು ಸರಳವಾಗಿ ಮತ್ತು ಸುಲಭವಾಗಿ ಬೋಧಿಸುವುದರ ಜೊತೆಗೆ, ಕೆ.ಪಿ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದಲ್ಲಿಯೂ ಪರಿಣತಿಯನ್ನು ಹೊಂದಿದ್ದೇನೆ.
ಕಳೆದ 8+ ವರ್ಷಗಳಿಂದ ಜ್ಯೋತಿಷ್ಯ ಜ್ಞಾನವನ್ನು ಹಂಚಿಕೊಳ್ಳುತ್ತಾ, ಮೂಲಭೂತ ತತ್ವಗಳಿಂದ ಹಿಡಿದು ಪ್ರಾಯೋಗಿಕ ಜಾತಕ ವಿಶ್ಲೇಷಣೆಯವರೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಜ್ಯೋತಿಷ್ಯವನ್ನು ಕೇವಲ ಕಲಿಸುವುದಷ್ಟೇ ಅಲ್ಲದೆ, ಅದನ್ನು ಅರ್ಥಮಾಡಿಕೊಂಡು ಪ್ರಾಯೋಗಿಕವಾಗಿ ಬಳಸುವ ಆತ್ಮವಿಶ್ವಾಸ ಬೆಳೆಸುವುದು ನಮ್ಮ ಮುಖ್ಯ ಉದ್ದೇಶ.
Jyotisya Souraba – ಜ್ಯೋತಿಷ್ಯ ಜ್ಞಾನವನ್ನು ಸರಳವಾಗಿ, ಸಮರ್ಥವಾಗಿ ಮತ್ತು ಸಮರ್ಪಣೆಯಿಂದ ಹಂಚಿಕೊಳ್ಳುವ ಒಂದು ಪ್ರಯತ್ನ.

